Vande Bharat Live TV News
देश • राज्य • जिला — खबरें तेज़, साफ और विश्वसनीय तरीके से
Kalaburagi

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ; ಡಿಸೆಂಬರ್‌ನಲ್ಲಿ ಘೋಷಣೆ.

29 Oct 2026, 05:47 PM • Vande Bharat Live TV News
📣 शेयर करें: Facebook X Telegram LinkedIn लिंक कॉपी हो गया ✅
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ; ಡಿಸೆಂಬರ್‌ನಲ್ಲಿ ಘೋಷಣೆ. - ಕಲಬುರಗಿ, कर्नाटक

ಚಿತ್ತಾಪುರ: ತಾಲೂಕಿನಲ್ಲಿ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಮುಂದಾಗಿದ್ದು, ಚಿತ್ತಾಪುರ ಮತ್ತು ವಾಡಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಚುರುಕುಗೊಂಡಿದೆ.

ಮಂಗಳವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ವೀಕ್ಷಕರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರವಿಂದಕುಮಾರ್ ಅರಳಿ ಅವರು ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚಿಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಂಘಟನಾತ್ಮಕ ಸೃಜನಾತ್ಮಕ ಅಭಿಯಾನ-2ರ' ಭಾಗವಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅತಿ ಹೆಚ್ಚು, ಅಂದರೆ 11 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂತೆಯೇ ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೂ 6 ಅರ್ಜಿಗಳು ಸಲ್ಲಿಕೆಯಾಗಿವೆ. ಇದು ಪಕ್ಷದಲ್ಲಿನ ಉತ್ಸಾಹ ಮತ್ತು ಪೈಪೋಟಿಯನ್ನು ಎತ್ತಿ ತೋರಿಸುತ್ತದೆ.

ಬ್ಲಾಕ್ ಮಟ್ಟದಲ್ಲಷ್ಟೇ ಅಲ್ಲದೆ, ಡಿ.ಸಿ.ಸಿ., ಬಿ.ಸಿ.ಸಿ. ಮತ್ತು ಎಲ್ಲಾ 31 ಸೆಲ್‌ಗಳಿಗೆ (ಘಟಕಗಳಿಗೆ) ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ನೇಮಿಸಲಾಗುವುದು. ವಿಶೇಷವಾಗಿ ಪ್ರತಿ 10 ಬೂತ್‌ಗಳಿಗೆ ಒಬ್ಬ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ನೇಮಕ ಮಾಡಲಾಗುವುದು. ಈ ಮೂಲಕ ಪಕ್ಷವನ್ನು 'ಲೀಡರ್ ಬೇಸ್ಡ್' (ಮುಖಂಡರ ಆಧಾರಿತ) ಇಂದ 'ಕೇಡರ್ ಬೇಸ್ಡ್' (ಕಾರ್ಯಕರ್ತರ ಆಧಾರಿತ) ಸಂಘಟನೆಯನ್ನಾಗಿ ಪರಿವರ್ತಿಸುವುದು ನಮ್ಮ ಗುರಿ ಎಂದು ಅರಳಿ ಅವರು ಸ್ಪಷ್ಟಪಡಿಸಿದರು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಿವರಗಳು, ಅವರಿಂದ ಪಡೆಯಲಾದ ಅಭಿಪ್ರಾಯಗಳು ಮತ್ತು ಕಾರ್ಯಕರ್ತರಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ವರದಿಯನ್ನು ಸಿದ್ಧಪಡಿಸಲಾಗುವುದು. ಈ ವರದಿಯನ್ನು ಸಂಪೂರ್ಣ ಗೌಪ್ಯವಾಗಿಟ್ಟು ಕೆ.ಪಿ.ಸಿ.ಸಿ.ಗೆ ಸಲ್ಲಿಸಲಾಗುತ್ತದೆ. ಅಂತಿಮವಾಗಿ ಬರುವ ಡಿಸೆಂಬರ್ ತಿಂಗಳಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ವೀಕ್ಷಕ ಅರವಿಂದಕುಮಾರ್ ಅರಳಿ, ಕೆ.ಪಿ.ಸಿ.ಸಿ. ಸಂಯೋಜಕಿ ಲಕ್ಷ್ಮೀಪತಿ ಮತ್ತು ಅಕ್ಕಮಹಾದೇವಿ ಆರ್. ಪಾಟೀಲ್ ಅವರನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಸದಸ್ಯರಾದ ನಾಗರೆಡ್ಡಿ ಪಾಟೀಲ್ ಕರದಳ, ಬ್ಲಾಕ್ ಅಧ್ಯಕ್ಷರಾದ ಭೀಮಣ್ಣ ಸಾಲಿ, ಮುಕ್ತಾರ್ ಪಟೇಲ್, ಚಂದ್ರಶೇಖರ್ ಕಾಶಿ, ಶೀಲಾ ಕಾಶಿ, ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ನಾಗರೆಡ್ಡಿ ಗೋಪಸೇನ್, ಎಂ.ಎ. ರಷೀದ್, ದೇವಿಂದ್ರ ಅರಣಕಲ್, ದೇವು ಯಾಬಾಳ, ಕಾಸಿಂ ಎಟುಜೆಡ್, ಸಂಜಯ್ ಬುಳಕರ್, ನಜೀರ್ ಅಡಕಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

📣 शेयर करें: Facebook X Telegram LinkedIn लिंक कॉपी हो गया ✅

🔔 Vande Bharat News Alerts

नई प्रमुख खबरों की browser notification पाने के लिए Subscribe करें।

संबंधित और ताज़ा खबरें

सहारनपुर में सपा ने घोषित किए पांच प्रत्याशी, बेहट से उमर अली खान को टिकट
Saharanpur25 Nov

सहारनपुर में सपा ने घोषित किए पांच प्रत्याशी, बेहट से उमर अली खान को टिकट

बेहट (सहारनपुर) समाजवादी पार्टी ने उत्तर प्रदेश विधानसभा चुनाव 2027 के लिए अपनी पहली पांच प्रत्याशियों की सूची…

पूरी खबर पढ़ें →
हजारों श्रमिकों को नहीं मिल पा रहा रोजगार आखिर कौन है जिम्मेदार
Kanpur Dehat25 Nov

हजारों श्रमिकों को नहीं मिल पा रहा रोजगार आखिर कौन है जिम्मेदार

कानपुर देहात (उत्तर प्रदेश) जनपद कानपुर देहात में ग्राम रोजगार सेवकों (GRS) की कलमबंद हड़ताल और कार्य बहिष्कार…

पूरी खबर पढ़ें →
आज संभाले गे पक्की पंचायत की कमान।नशा और भ्रष्टाचार मुख्य रहेंगी चुनौतियां।
Ganganagar24 Nov

आज संभाले गे पक्की पंचायत की कमान।नशा और भ्रष्टाचार मुख्य रहेंगी चुनौतियां।

श्री गंगानगर जिले की ग्राम पंचायत पक्की से सरपंच गुरमीत राय संभाले गे पक्की पंचायत की कमान।लंबे समय…

पूरी खबर पढ़ें →
संत गुरु रविदास जी की 650वी जयंती पर शामली से सहारनपुर के लिए उमड़ा जनसैलाब,इस मौक़े पर जनपद शामली से अनुसुचित मौर्चा की टीम ने बढ़ चढ़ कर भाग लिया
Shamli24 Nov

संत गुरु रविदास जी की 650वी जयंती पर शामली से सहारनपुर के लिए उमड़ा जनसैलाब,इस मौक़े पर जनपद शामली से अनुसुचित मौर्चा की टीम ने बढ़ चढ़ कर भाग लिया

*सहारनपुर/शामली में समरसता संकल्प यात्रा का भव्य आयोजन, संत गुरु रविदास जी की 650वीं जयंती पर उमड़ा जनसैलाब*…

पूरी खबर पढ़ें →
गुरु नानक जयंती पर भारतीय बाल महिला एवं जन कल्याण संस्थान ने सीएचसी में फल वितरित किए
Etawah24 Nov

गुरु नानक जयंती पर भारतीय बाल महिला एवं जन कल्याण संस्थान ने सीएचसी में फल वितरित किए

गुरु नानक जयंती पर भारतीय बाल महिला एवं जन कल्याण संस्थान ने सीएचसी में फल वितरित किए जसवंतनगर/इटावा।…

पूरी खबर पढ़ें →
error: Content is protected !!