Vande Bharat Live TV News
देश • राज्य • जिला — खबरें तेज़, साफ और विश्वसनीय तरीके से
Kalaburagi

ಸ್ವಂತ ಕಟ್ಟಡವಿದ್ದರೂ ಬಾಡಿಗೆ ಮನೆಯಲ್ಲಿ ಅಂಗನವಾಡಿ.

30 Oct 2026, 03:14 PM • Vande Bharat Live TV News
📣 शेयर करें: Facebook X Telegram LinkedIn लिंक कॉपी हो गया ✅
ಸ್ವಂತ ಕಟ್ಟಡವಿದ್ದರೂ ಬಾಡಿಗೆ ಮನೆಯಲ್ಲಿ ಅಂಗನವಾಡಿ. - ಕಲಬುರಗಿ, कर्नाटक

ಚಿತ್ತಾಪುರ: ಪಟ್ಟಣದ ವಾರ್ಡ್ ನಂ. 3ರ ಇಂದಿರಾನಗರದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ಸ್ವಂತ ಕಟ್ಟಡ ನಿರ್ಮಾಣವಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಬಾಡಿಗೆ ಮನೆಯಲ್ಲಿಯೇ ಕೇಂದ್ರ ನಡೆಸಲಾಗುತ್ತಿದೆ ಎಂದು ಬಿಜೆಪಿ ಮಂಡಲ ವಾರ್ಡ್ ಅಧ್ಯಕ್ಷ ಅಂಬರೀಶ್ ಭೋವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2021-22ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ) ವತಿಯಿಂದ ಅಂದಾಜು ₹20.39 ಲಕ್ಷ ವೆಚ್ಚದಲ್ಲಿ ಈ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಗಿತ್ತು. ಆದರೆ ಕಟ್ಟಡದ ಸುತ್ತಲೂ ಕಾಂಪೌಂಡ್ ನಿರ್ಮಿಸಿಲ್ಲ. ಜೊತೆಗೆ ಕೇಂದ್ರದ ಮುಂಭಾಗದಲ್ಲೇ ಚರಂಡಿ ನೀರು ನಿಲ್ಲುತ್ತಿದ್ದು, ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಮಳೆಗಾಲದಲ್ಲಿ ಮಳೆ ನೀರು ನೇರವಾಗಿ ಕೇಂದ್ರದೊಳಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಎಲ್ಲ ಸಮಸ್ಯೆಗಳಿಂದಾಗಿ ಸುಮಾರು 50ಕ್ಕೂ ಹೆಚ್ಚು ಮಕ್ಕಳಿರುವ ಈ ಅಂಗನವಾಡಿ ಕೇಂದ್ರವನ್ನು ಕಳೆದ 3-4 ವರ್ಷಗಳಿಂದ ತಿಂಗಳಿಗೆ ₹5 ರಿಂದ ₹6 ಸಾವಿರ ಬಾಡಿಗೆ ನೀಡಿ ಖಾಸಗಿ ಮನೆಯಲ್ಲಿ ನಡೆಸಲಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಿದರೂ ಅದು ಉಪಯೋಗಕ್ಕೆ ಬಾರದಂತಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಕಟ್ಟಡದ ಮುಂದೆ ಮುರುಮ್ ಹಾಕಿ, ಕಾಂಪೌಂಡ್ ನಿರ್ಮಿಸಿ ವಿಷಜಂತುಗಳ ಕಾಟವಿಲ್ಲದಂತೆ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಈ ಸ್ವಂತ ಕಟ್ಟಡದಲ್ಲಿ ಅಂಗನವಾಡಿ ಪುನಃ ಆರಂಭಿಸಿದರೆ ಪ್ರತಿ ತಿಂಗಳು ಸರ್ಕಾರಕ್ಕೆ ಪಾವತಿಸುವ ಸಾವಿರಾರು ರೂಪಾಯಿ ಬಾಡಿಗೆ ಹಣ ಉಳಿತಾಯವಾಗುತ್ತದೆ.

ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬರೀಶ್ ಭೋವಿ ಎಚ್ಚರಿಸಿದ್ದಾರೆ.

"ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಅಂಗನವಾಡಿ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ, ಸ್ವಂತ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರವನ್ನು ಪುನಃ ಆರಂಭಿಸಲು ಸೂಕ್ತ ಕ್ರಮ ವಹಿಸಲಾಗುವುದು."
– ಆರತಿ ತುಪ್ಪದ್, ಸಿಡಿಪಿಒ, ಚಿತ್ತಾಪುರ

📣 शेयर करें: Facebook X Telegram LinkedIn लिंक कॉपी हो गया ✅

🔔 Vande Bharat News Alerts

नई प्रमुख खबरों की browser notification पाने के लिए Subscribe करें।

संबंधित और ताज़ा खबरें

यमुनानगर में नहर में बिजनेसमैन का शव मिलने से मचा हड़कंप, किनारे पर खड़ी मिली ऑडी कार; कल से था लापता
Kurukshetra30 Oct

यमुनानगर में नहर में बिजनेसमैन का शव मिलने से मचा हड़कंप, किनारे पर खड़ी मिली ऑडी कार; कल से था लापता

Sandeep Sharma District Reporter Kurukshetra Haryana हरियाणा के यमुनानगर के थाना बुढ़िया इलाके में पश्चिमी यमुना नहर में…

पूरी खबर पढ़ें →
हरियाणा में मौसम को लेकर बड़ा अलर्ट, 18 जिलों में  तेज हवाओं के साथ बारिश की चेतावनी; कई जगह ओले गिरने के आसार
Kurukshetra30 Oct

हरियाणा में मौसम को लेकर बड़ा अलर्ट, 18 जिलों में  तेज हवाओं के साथ बारिश की चेतावनी; कई जगह ओले गिरने के आसार

Sandeep Sharma District Reporter Kurukshetra Haryana हरियाणा में मौसम में एक बार फिर बदलाव देखने को मिल रहा…

पूरी खबर पढ़ें →
हरियाणा में वोटर लिस्ट को लेकर बड़ा अपडेट, चुनाव आयोग ने SIR की समयसीमा बढ़ाई; अब इस तारीख तक दर्ज करा सकेंगे दावे-आपत्तियां
Kurukshetra30 Oct

हरियाणा में वोटर लिस्ट को लेकर बड़ा अपडेट, चुनाव आयोग ने SIR की समयसीमा बढ़ाई; अब इस तारीख तक दर्ज करा सकेंगे दावे-आपत्तियां

Sandeep Sharma District Reporter Kurukshetra Haryana चुनाव आयोग ने पांच राज्यों और केंद्रशासित प्रदेश दिल्ली में मतदाता सूचियों…

पूरी खबर पढ़ें →
error: Content is protected !!